ಡೇನಿಯಲ್ ಲುಕಾ ವೆಟ್ಟೊರಿ (ಜನನ 27 ಜನವರಿ 1979) ಒಬ್ಬ ಕ್ರಿಕೆಟ್ ಆಟಗಾರ ಹಾಗು ನ್ಯೂಜಿಲೆಂಡ್ ಕ್ರಿಕೆಟ್ ತಂಡ ದ ಹಾಲಿ ನಾಯಕ. ಈತ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ 300 ವಿಕೆಟ್ ಗಳನ್ನು ಹಾಗು 3,000 ರನ್ನುಗಳನ್ನು ಗಳಿಸಿದ ಎಂಟನೇ ಆಟಗಾರ. ಕಳೆದ 1996-97ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿ, ಟೆಸ್ಟ್ ಕ್ರಿಕೆಟ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾನೆ. ವೆಟ್ಟೊರಿ ಒಬ್ಬ ಬೌಲಿಂಗ್ ಆಲ್ ರೌಂಡರ್, ಈತ ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಸ್ಪಿನ್ ಬೌಲಿಂಗ್ ಮಾಡುತ್ತಾನೆ. ಈತ ಅದ್ಭುತವಾಗಿ ಚೆಂಡನ್ನು ತಿರುಗಿಸುವುದಕ್ಕಾಗಲಿ ಅಥವಾ ಅತಿ ಸೂಕ್ಷ್ಮ ನಿಖರತೆಗಿಂತ ಹೆಚ್ಚಾಗಿ ತನ್ನ ಬೌಲಿಂಗ್‌ನಲ್ಲಿ ಫ್ಲೈಟ್ ಹಾಗು ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈತನ ಬ್ಯಾಟಿಂಗ್ ಸರಾಸರಿ ಸುಮಾರು 30ರಷ್ಟಿದೆ. ಇದು ಈತನನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಒಬ್ಬ ಸ್ಥಿರ ಹಾಗು ಉತ್ತಮ ಬ್ಯಾಟ್ಸ್‌ಮ್ಯಾನ್‌ನನ್ನಾಗಿ ರೂಪಿಸಿದೆ. ಈತ ಆಕ್ಲಂಡ್ ನಲ್ಲಿ ಹುಟ್ಟಿ ಹ್ಯಾಮಿಲ್ಟನ್ ನಲ್ಲಿ ಬೆಳೆದಿದ್ದಾನೆ. ಇವನು ಕ್ರಮವಾಗಿ ಮರಿಯನ್ ಶಾಲೆ ಹಾಗು . ಪಾಲ್'ಸ್ ಕಾಲೇಜಿಯೇಟ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ. ತನ್ನ ಬಿಡುವಿನ ಅವಧಿಯಲ್ಲಿ, ಈತ ನಾರ್ತ್ಹನ್ ಡಿಸ್ಟ್ರಿಕ್ಟ್ಸ್ ಪರವಾಗಿ ಪ್ರಾಂತೀಯ ಕ್ರಿಕೆಟ್ ನ್ನು ಆಡುವುದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಪರ ಆಡುವ ಅಂತಾರಾಷ್ಟ್ರೀಯ ಆಟಗಾರ. ವೆಟ್ಟೊರಿ ಟ್ವೆಂಟಿ20 ಬಿಗ್ ಬ್ಯಾಷ್ ಕ್ವೀನ್ಸ್ ಲ್ಯಾಂಡ್ ಬುಲ್ಲ್ಸ್ ತಂಡವನ್ನೂ ಸಹ ಪ್ರತಿನಿಧಿಸುತ್ತಾನೆ. ಆಟವನ್ನು ಆಡುವಾಗ ವೈದ್ಯರ ಸಲಹೆಯ ಮೇರೆಗೆ ಕನ್ನಡಕ ವನ್ನು ಧರಿಸುವ ಕೆಲವೇ ಕೆಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳಲ್ಲಿ ಒಬ್ಬ ಹಾಗು ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಮೊದಲ ಇಟಲಿಯನ್ ಸಂತತಿಯ ಕ್ರಿಕೆಟ್ ಆಟಗಾರ. == ಬೌಲಿಂಗ್ ದಾಖಲೆಗಳು == ಈತ ತನ್ನ 300ನೇ ಟೆಸ್ಟ್ ವಿಕೆಟ್ ನ್ನು ಶ್ರೀಲಂಕಾದಲ್ಲಿ 2009ರಲ್ಲಿ ಪಡೆಯುವುದರ ಜೊತೆಗೆ ಆ ದಾಖಲೆಯನ್ನು ಮುರಿದ ಎರಡನೇ ನ್ಯೂಜಿಲೆಂಡ್ ಬೌಲರ್ (ರಿಚರ್ಡ್ ಹ್ಯಾಡ್ಲಿ ಯ ನಂತರ). ಇದಲ್ಲದೆ ಈತ ಸದ್ಯಕ್ಕೆ ನ್ಯೂಜಿಲೆಂಡ್ ನ ಪರ ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದವನಾಗಿದ್ದಾನೆ. ವೆಟ್ಟೊರಿ ಟೆಸ್ಟ್ ಕ್ರಿಕೆಟ್ ನಲ್ಲಿ, ಶ್ರೀಲಂಕಾ, ಆಸ್ಟ್ರೇಲಿಯ ಹಾಗು ಬಾಂಗ್ಲಾದೇಶದ ವಿರುದ್ಧ ಮೂರು ಬಾರಿ 10 ವಿಕೆಟ್ಟುಗಳನ್ನು ಗಳಿಸಿದ್ದಾರೆ. ಆಕ್ಲಂಡ್ ನಲ್ಲಿ 1999-2000ದಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 7/87 ಗಳಿಸಿದ ಅವನ ಸಾಧನೆಯು ಅತ್ಯುತ್ತಮ ಇನ್ನಿಂಗ್ಸ್ ಅಂಕಿಅಂಶಗಳೆನಿಸಿವೆ. ಆ ಪಂದ್ಯದಲ್ಲಿ ಆತ 12/149 ಗಳಿಸುವುದರೊಂದಿಗೆ ತನ್ನ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ. ಇದು ನ್ಯೂಜಿಲೆಂಡ್ ಆಟಗಾರ ಗಳಿಸಿದ ಎರಡನೇ ಅತ್ಯುತ್ತಮ ಸಾಧನೆಯಾಗಿದ್ದು,ರಿಚರ್ಡ್ ಹ್ಯಾಡ್ಲಿ ಈತನಿಗಿಂತ ಪಂದ್ಯವೊಂದರಲ್ಲಿ ಅಧಿಕ ವಿಕೆಟ್ಟನ್ನು ಗಳಿಸಿದ್ದಾನೆ. ಚಿತ್ತಗಾಂಗ್ ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 12 ವಿಕೆಟ್ಟುಗಳನ್ನು ಗಳಿಸುವುದರೊಂದಿಗೆ, ಈತ ಎರಡು ಸಂದರ್ಭಗಳಲ್ಲಿ ಟೆಸ್ಟ್ ಪಂದ್ಯದಲ್ಲಿ ಒಂದು ಡಜನ್ ವಿಕೆಟ್ಟನ್ನು ಕಬಳಿಸಿದ ಏಕೈಕ ನ್ಯೂಜಿಲೆಂಡ್ ಆಟಗಾರನೆನಿಸಿದ. ಈತ ಟೆಸ್ಟ್ ಪಂದ್ಯಾವಳಿಯಲ್ಲಿ ಹೆಚ್ಚಿನ ಬಾರಿ ಶೇನ್ ವಾರ್ನ್ ರನ್ನು ಔಟು ಮಾಡಿದ ಬೌಲರ್. ವಾರ್ನ್ ರನ್ನು ಒಂಬತ್ತು ಬಾರಿ ಔಟ್ ಮಾಡಿದ್ದಾನೆ. ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಈತನ ಬೌಲಿಂಗ್‌ನಲ್ಲಿ ವಾರ್ನ್ 99 ರನ್ನಿಗೆ ಔಟ್ ಆದದ್ದು ಬಹಳ ಗಮನಾರ್ಹವಾಗಿದೆ. ಕಾಕತಾಳೀಯವಾಗಿ, ವೆಟ್ಟೊರಿ, 2009-10ರ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧದ 1ನೇ ಟೆಸ್ಟ್‌ನಲ್ಲಿ, 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಶತಕಗಳ ದಾಖಲೆ ಬೆನ್ನಟ್ಟಿ, ಸ್ವತಃ 99 ರನ್‌ಗಳಿಸಿ ಔಟಾದ. == ನಾಯಕತ್ವ == ಕಳೆದ 2007ರಲ್ಲಿ ಒಂದು ಕಾಯಂ ಆಧಾರದ ಮೇಲೆ ನಾಯಕನಾಗುವ ಮೊದಲು, ವೆಟ್ಟೊರಿ,ಬ್ಲಾಕ್ ಕ್ಯಾಪ್ಸ್ ಕಾಯಂ ನಾಯಕ ಸ್ಟೀಫನ್ ಫ್ಲೆಮಿಂಗ್ ಕ್ರಿಕೆಟ್ ಗೆ ಅಲಭ್ಯವಾದ ಸಂದರ್ಭಗಳಲ್ಲಿ ತಂಡದ ನಾಯಕತ್ವವನ್ನು ಆಗಾಗ್ಗೆ ವಹಿಸಿಕೊಳ್ಳುತ್ತಿದ್ದ. ಕಳೆದ 2006ರ ಕೊನೆಯಲ್ಲಿ, ಅವನು ನ್ಯೂಜಿಲೆಂಡ್ ತಂಡದ 11 ಪಂದ್ಯಗಳಿಗೆ ನಾಯಕತ್ವವನ್ನು ವಹಿಸಿದ. ಇದರಲ್ಲಿ ತಂಡವು 8 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿತು. ಸೌತ್ ಆಫ್ರಿಕಾದಲ್ಲಿ ನಡೆದ ಟ್ವೆಂಟಿ20 ವರ್ಲ್ಡ್ ಚಾಂಪಿಯನ್ ಶಿಪ್ಉದ್ಘಾಟನಾ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡದ ನಾಯಕನಾಗಿದ್ದ. ತರುವಾಯ, ವೆಟ್ಟೊರಿಯನ್ನು ಪಂದ್ಯದ ಎಲ್ಲ ರೂಪಗಳಿಗೂ ಬ್ಲಾಕ್ ಕ್ಯಾಪ್ಸ್ ನ ನಾಯಕನೆಂದು ಘೋಷಿಸಲಾಯಿತು: ಟ್ವೆಂಟಿ20, ಹಾಗು ಟೆಸ್ಟ್ ಪಂದ್ಯಾವಳಿಗಳು. ಪ್ರಾರಂಭದಲ್ಲಿ, ಇವರನ್ನು ಮೊದಲ ಎರಡು ಪಂದ್ಯಗಳಿಗೆ ಮಾತ್ರ ನಾಯಕನೆಂದು ಘೋಷಿಸಲಾಗಿತ್ತು. ವೆಟ್ಟೊರಿಯ ನಾಯಕತ್ವವು ಕಠಿಣ ಹಾದಿಯಲ್ಲಿ ಆರಂಭವಾಯಿತು, ತಂಡವು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಸೋಲನ್ನು ಅನುಭವಿಸಿತು. ದಿ ಓವಲ್ ನಲ್ಲಿ ನಡೆದ ಅದರ ಮುಂದಿನ ಸರಣಿಯಲ್ಲಿ, ವಿವಾದಾತ್ಮಕ ರನ್ ಔಟ್‌ಗೆ ಸಂಬಂಧಿಸಿದಂತೆ ಬಾಲ್ಕನಿಯಿಂದ ಕೋಪೋದ್ರಿಕ್ತರಾಗಿ ಕೂಗಿಕೊಂಡು ಕೆಲವರ ಟೀಕಾಪ್ರವಾಹಗಳಿಗೆ ವೆಟ್ಟೋರಿ ಗುರಿಯಾದ. ಆತ ಪಂದ್ಯದ ನಂತರ ಇಂಗ್ಲೆಂಡ್ ತಂಡದ ಜೊತೆಗೆ ಹಸ್ತಲಾಘವ ಮಾಡಲು ನಿರಾಕರಿಸಿದ. ಇದು ಫ್ಲೆಮಿಂಗ್‌ರ ಆಸಕ್ತಿರಹಿತ, ವಿಶ್ರಮಿಸಿಕೊಳ್ಳುವ ಶೈಲಿಗೆ ವಿರುದ್ಧವಾಗಿತ್ತು. == ಬ್ಯಾಟಿಂಗ್ == ವೆಟ್ಟೊರಿ ಒಬ್ಬ ಉಪಯುಕ್ತ ಕೆಳ-ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಆಗಿ ಪಕ್ವತೆಯನ್ನು ಹೊಂದಿದ್ದಾನೆ. ಜೊತೆಗೆ 3,000 ಟೆಸ್ಟ್ ರನ್ನುಗಳನ್ನು ಗಳಿಸಿದ್ದಾರೆ, ಇದರಲ್ಲಿ ಐದು ಶತಕಗಳು ಹಾಗು (2009ರಲ್ಲಿ ಪಾಕಿಸ್ತಾನದ ವಿರುದ್ಧ 134, 2009ರಲ್ಲಿ ಶ್ರೀಲಂಕಾ ವಿರುದ್ಧ 140, 2003ರಲ್ಲಿ ಪಾಕಿಸ್ತಾನದ ವಿರುದ್ಧ 137*, 2005ರಲ್ಲಿ ಜಿಂಬಾಬ್ವೆ ವಿರುದ್ಧ 127 ಹಾಗು 2009ರಲ್ಲಿ ಭಾರತದ ವಿರುದ್ಧ 118)ಹಾಗೂ ಹಲವಾರು ಅರ್ಧ-ಶತಕಗಳು ಸೇರಿವೆ. ಆದಾಗ್ಯೂ, ವೆಟ್ಟೊರಿ 17.24 ಸರಾಸರಿಯಲ್ಲಿ ತಮ್ಮ ಮೊದಲ 1,000 ರನ್ನುಗಳನ್ನು ಗಳಿಸಲು 47 ಟೆಸ್ಟ್ ಗಳನ್ನೂ ಎದುರಿಸಿದರೂ,ಎರಡನೇ ಸಾವಿರ ರನ್ನುಗಳನ್ನು ಅವನು ಪ್ರತಿ ಇನ್ನಿಂಗ್ಸ್ ಗೆ ಶೇಕಡ 42.52 ರೇಟ್‌ನಲ್ಲಿ ಕೇವಲ 22 ಟೆಸ್ಟ್‌ಗಳಲ್ಲಿ ಗಳಿಸಿದ. ಡಿಸೆಂಬರ್ 2006ರಿಂದ, ವೆಟ್ಟೊರಿ ಸ್ವತಃ ಒಬ್ಬ ಆಲ್-ರೌಂಡರ್ ಆಗಿ ಸ್ಥಾಪಿಸಿಕೊಳ್ಳುವುದರ ಜೊತೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ. ಕಳೆದ 4 ಡಿಸೆಂಬರ್ 2009ರಲ್ಲಿ, ಪಾಕಿಸ್ತಾನ್ ವಿರುದ್ಧ ಬ್ಲಾಕ್ ಕ್ಯಾಪ್ಸ್ ಕೇವಲ 99 ರನ್ನುಗಳನ್ನು ಗಳಿಸಿದರೂ, ವೆಟ್ಟೊರಿ ಬ್ಯಾಟಿಂಗ್ ನ 8ನೇ ಕ್ರಮಾಂಕದಲ್ಲಿ ಅತ್ಯಂತ ಹೆಚ್ಚಿನ ಟೆಸ್ಟ್ ರನ್ನುಗಳನ್ನು ಗಳಿಸಿದವರೆನಿಸಿದ. ಹಾಗೂಶೇನ್ ವಾರ್ನ್ ರ ಹಿಂದಿನ ದಾಖಲೆಯನ್ನು ಮುರಿದ. ಕಳೆದ 11 ಡಿಸೆಂಬರ್ 2009ರಲ್ಲಿ ಪಾಕಿಸ್ತಾನ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ, ವೆಟ್ಟೊರಿ, ಬ್ಯಾಟಿಂಗ್ ನ 6ನೇ ಕ್ರಮಾಂಕಕ್ಕೆ ಸ್ವತಃ ಭಡ್ತಿ ಪಡೆದ. ಇವರು ಭವಿಷ್ಯದ ಟೆಸ್ಟ್ ಪಂದ್ಯಗಳಲ್ಲಿ ಇದೇ ಕ್ರಮಾಂಕದಲ್ಲಿ ಆಡಬಹುದೆಂದು ಎಣಿಸಲಾಗಿದೆ. == ಸಾಧನೆಗಳು == === ಟೆಸ್ಟ್ ಶತಕಗಳು === ಅಂಕಣದಲ್ಲಿರುವುದು ರನ್ನುಗಳು ,* ಚಿಹ್ನೆಯು ನಾಟ್ ಔಟ್ ನ್ನು ಸೂಚಿಸುತ್ತದೆ. ಅಂಕಣದ ಶೀರ್ಷಿಕೆ ಮ್ಯಾಚ್ ಅವರ ವೃತ್ತಿಜೀವನದ ಮ್ಯಾಚ್ ನಂಬರ್ ಅನ್ನು ಸೂಚಿಸುತ್ತದೆ. === ಟೆಸ್ಟ್‌ಗಳಲ್ಲಿ ಐದು-ವಿಕೆಟ್‌ ಗಳಿಕೆ === = = = ಏಕದಿನ ಅಂತಾರಾಷ್ಟ್ರೀಯ 5-ವಿಕೆಟ್ ಗಳಿಕೆ === == ವೈಯಕ್ತಿಕ ಜೀವನ == ವೆಟ್ಟೊರಿ, ಮೇರಿ ಓ'ಕಾರ್ರೋಲ್ ರನ್ನು ವಿವಾಹವಾಗಿದ್ದಾರೆ. ಇವರು ತಮ್ಮ ಪತ್ನಿಯ ಜೊತೆ ವಾಸಿಸಲು ಹಾಮಿಲ್ಟನ್ ನಿಂದ ಆಕ್ಲಂಡ್‌ಗೆ ಸ್ಥಳ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ನಾರ್ತ್ಹನ್ ಡಿಸ್ಟ್ರಿಕ್ಟ್ಸ್ ನೈಟ್ಸ್ ತಂಡದ ಪರವಾಗಿ ಆಟವನ್ನು ಮುಂದುವರೆಸಿದ್ದಾರೆ. ಅವರಿಗೆ ಜೇಮ್ಸ್ ಎಂಬ ಮಗನಿದ್ದಾನೆ(ಜನನ 8 ಮಾರ್ಚ್ 2009). == ಜೀವನ ಚರಿತ್ರೆ == ವೆಟ್ಟೊರಿಯ ಜೀವನಚರಿತ್ರೆಯನ್ನು ಆಗಸ್ಟ್ 2008ರಲ್ಲಿ ಪ್ರಕಟಿಸಲಾಯಿತು. ಡೇನಿಯಲ್ ವೆಟ್ಟೊರಿ, ನ್ಯೂಜಿಲೆಂಡ್ ಆಲ್ ಬ್ಲಾಕ್ಸ್ ನ ಮಾಜಿ ಒಂದು ಟೆಸ್ಟ್ ಫೈವ್-ಏತ್ ಆಟಗಾರನಾಗಿದ್ದು,ಈಗ ಸೂಪರ್14 ಫ್ರಾಂಚೈಸ್ ವೆಸ್ಟರ್ನ್ ಫೋರ್ಸ್ ತಂಡದ ಪರ ಆಡುತ್ತಾರೆ. == ಟಿಪ್ಪಣಿಗಳು == == ಬಾಹ್ಯ ಕೊಂಡಿಗಳು == ಕ್ರೀಡಾಪಟು ವಿವರ: ಡೇನಿಯಲ್ ವೆಟ್ಟೊರಿ - ಇಎಸ್‍ಪಿಎನ್ ಕ್ರಿಕ್‍ಇನ್ಪೊನಿಂದ ಪ್ಲೇಯರ್ ರ‌್ಯಾಕಿಂಗ್ಸ್ 2009-01-13 ವೇಬ್ಯಾಕ್ ಮೆಷಿನ್ ನಲ್ಲಿ. ಡೇನಿಯಲ್ ವೆಟ್ಟೊರಿ